•  
  •  
  •  
  •  
Index   ವಚನ - 638    Search  
 
ದೃಷ್ಟರಪ್ಪ ಗುರುಕರುಣದಲ್ಲಿ ಇಷ್ಟಲಿಂಗವ ಸಂಬಂಧಿಸಿಕೊಟ್ಟ ಬಳಿಕ ಮರಳಿ ಯೋಗವುಂಟೆ? ಸರ್ವಯೋಗಕ್ಕೆ ಶಿವಯೋಗ ಮಹಾಯೋಗವೆಂದರಿದ ಬಳಿಕ, ಮತ್ತೆ ಕಿರಿದು ಯೋಗವೆಂದು ಪಾದೋದಕ ಪ್ರಸಾದಕ್ಕೆ ಹೊರಗಾಗಿ ಗುರುವಾಜ್ಞೆಯ ಮೀರಿದ ಗುರುದ್ರೋಹಿಗಳ ಎನ್ನತ್ತ ತೋರದಿರಯ್ಯ, ನಿಮ್ಮ ಧರ್ಮ. ದೀಕ್ಷಾತ್ರಯದಲ್ಲಿ ಸಂಪನ್ನರಾಗಿ, ಪ್ರಸಾದದಲ್ಲಿ ಲೋಲುಪ್ತರಾಗಿ, ಜಂಗಮವೆ ಲಿಂಗವೆಂಬವರ ಎನಗೊಮ್ಮೆ ತೋರಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ.
Transliteration Dr̥ṣṭarappa gurukaruṇadalli iṣṭaliṅgava sambandhisikoṭṭa baḷika maraḷi yōgavuṇṭe? Sarvayōgakke śivayōga mahāyōgavendarida baḷika, matte kiridu yōgavendu pādōdaka prasādakke horagāgi guruvājñeya mīrida gurudrōhigaḷa ennatta tōradirayya, nim'ma dharma. Dīkṣātrayadalli sampannarāgi, prasādadalli lōluptarāgi, jaṅgamave liṅgavembavara enagom'me tōrayya, kapilasid'dhamallikārjunayya nim'ma dharma.