ದೂರದ ಬಟ್ಟೆಯ ಹೋಗಿ ಪಥಶ್ರಾಂತನಾಗಿದ್ದು,
ಹಿಂದೆ ತಿರುಗಿ ನೋಡದಿರು ಕಂಡಾ, ಎಲೆ ಗಂಡನೆ.
ಹಿಂದೆ ತಿರುಗಿ ನೋಡಿದಲ್ಲಿ ಕೆಟ್ಟರು ಕೋಟಿ ಬ್ರಹ್ಮಜ್ಞರು,
ಹಿಂದೆ ತಿರುಗಿ ನೋಡಿದಡೆ ಮುಂದೆ ವಿಸ್ತಾರವೆಂದಿದ್ದೆಯಾದಡೆ
ತಂದೆ ಒಲಿವ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Dūrada baṭṭeya hōgi pathaśrāntanāgiddare,
hinde tirugi nōḍadiru kaṇḍa, ele gaṇḍane.
Hinde tirugi nōḍida keṭṭaru kōṭi brahmajñaru,
hinde tirugi nōḍidaḍe munde vistāravendiddeyādaḍe
tande oliva kāṇā kapilasid'dhamallikārjuna.