ವಚನ - 643     
 
ದೇವ ನಿನ್ನಯ ಪರಿಯನಾರಯ್ಯಲರಿದಯ್ಯ ಆರೈದ ಶರಣರು ನಿನ್ನ ಪದದಲ್ಲಿ ಓರಂತೆ ಆನಂದಸ್ಥಾನದಲ್ಲಿ ತಾವು ನಿನ್ನಯ ರೂಪ ಭಾವ ತಪ್ಪದೆ ಇಪ್ಪರೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.