•  
  •  
  •  
  •  
Index   ವಚನ - 671    Search  
 
ನಯನೇಂದ್ರಿಯಂಗಳು ಮುಟ್ಟದೆ, ಶ್ರೋತ್ರೇಂದ್ರಿಯಂಗಳು ಮುಟ್ಟದೆ, ಘ್ರಾಣೇಂದ್ರಿಯಂಗಳು ಮುಟ್ಟದೆ, ಜಿಹ್ವೇಂದ್ರಿಯಂಗಳು ಮುಟ್ಟದೆ, ತ್ವಗಿಂದ್ರಿಯಂಗಳು ಮುಟ್ಟದೆ- ಇಂತು ಇಂದ್ರಿಯಂಗಳು ಹಲವ ಹರಿಯದೆ, ಇವು ಈಶನಮುಖವೆಂದರ್ಪಿಸಾ ಸೂಸಲೀಯದೆ, ಸರ್ವಕರಣಂಗಳು ಈಶನ ಕರಣಂಗಳೆಂದರ್ಪಿಸಾ. ಎಲೆ ಅಯ್ಯಾ, ನಿನಗೆ ಗುರುಕರುಣವಾದ ಬಳಿಕ, ಸರ್ವಾಂಗ ಲಿಂಗಾಂಗವೆಂದರ್ಪಿಸಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯವ ಕೂಡಾ ಅಯ್ಯಾ.
Transliteration Nayanēndriyagaḷu muṭṭade, śrōtrēndriyaṅgaḷu muṭṭade, ghrāṇēndriyaṅgaḷu muṭṭade, jihvēndriyaṅgaḷu muṭṭade, tvagindriyaṅgaḷu muṭṭade- intu indriyaṅgaḷu halava hariyade, ivu īśanamukhavendarpisa sūsalīyade, sarvakaraṇaṅgaḷu īśana karaṇaṅgaḷendarpisa. Ele ayya, ninage gurukaruṇavāda baḷika, sarvāṅga liṅgāṅgavendarpisi kapilasid'dhamallikārjunayyanemba nityavū ayyā.