ನಾನಾ ಭವದಲ್ಲಿ ಬಂದು, ಮಾಡಿದುದನುಂಬ
ಲೋಕದ ಲೌಕಿಕ[ರು]ಗಳಿರಾ ಕೇಳಿರೇ, ನೀವು:
ಏಕೋದೇವನರ್ಚಿಸಿರೇ.
ಜನ್ಮಕರ್ಮವೆಂಬ ಕಾನನದೊಳಗೆ ಬೀಳದೆ,
ಐದಾರೇಳೆಂಟೆಂದೆಂಬ ಮೃಗದ ಕೈಯಲಿ ತಿನಿಸಿಕೊಳ್ಳದೆ,
ಐದು ಬಾಣವನುಳ್ಳವಂಗೆ ನೀನು ಗುರಿಯಾಗದೆ
ನೆನೆಯಾ ಶಿವನ ವಿಚಿತ್ರಮೂಲ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ,
ಹತ್ತೆ ಸಾರಿ ನೀನು ಸುಖಿಯಾಗು.
Transliteration Nānā bhavadalli bandu, māḍidudanumba
lōkada laukika[ru]gaḷirā kēḷirē, nīvu:
Ēkōdēvanarcisirē।
janmakarmavemba kānanadoḷage bīḷade,
aidāreḷeṇṭendemba mr̥gada kaiyali tinisikoḷḷade,
aidu bāṇavanuḷḷavaṅge nīnu guriyāgade
neneyā śivana vicitramūla.
Kapilasid'dhamallikārjunayyana,
hatte sāri nīnu sukhiyāgu.