Index   ವಚನ - 697    Search  
 
ನಿನ್ನಡಕ ನೀನೆಯಾದೆ ಬಸವಲಿಂಗವೆ. ಎನ್ನ ಚಿತ್ಪಿಂಡದ ರೂಪು ನಿಮ್ಮಲ್ಲಿ ತಲ್ಲೀಯವಾಯಿತ್ತು ಬಸವ ಗುರುವೆ. ಭಾವಿಸಿಹೆನೆಂಬ ಭಾವ ನಷ್ಟವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥನ ಗುರು ಬಸವಾ.