ನಿಷ್ಕಳಾತ್ಮನನು ಅರ್ಚಿಸೇನೆಂದೆಂಬೆ
ಆ ನಿಷ್ಕಳವನರ್ಚಿಸುವ
ಪರಿ ಹೇಂಗೊ? ಎಲೆ ಅಯ್ಯಾ:
ನೀನು ಸಕಲದೊಳಗೆ ಇದ್ದು ನಿಷ್ಕಳವ ಭೇದಿಸಿ
ಪೂರತನಾದೆನೆಂಬೆ.
ನೀನೀ ಬೀಡಲಿರದಿದ್ದು
ಒಬ್ಬಳ ಸಂಗವನೈವರು ಮಾಡುವಲ್ಲಿ
ಕಾಬ ಪರಿಯ ಹೇಗೊ?
ಗುರು ಕರಣವುಳ್ಳವಂಗಲ್ಲದೆ.
ಅನಾಹತಲೋಕದಲ್ಲಿ ವಿಶ್ರಮಿಸುವಲ್ಲಿ,
ಮೂಲ ತೊಡಗಿ ಸಾದಾಖ್ಯಪರಿಯಂತರ
ಹೊಲಬುದಪ್ಪಿ ಬಪ್ಪಾಗ
ಕಂಡವರಾರೊ ನಿನ್ನ ಪರಿಯ,
ಗುರು ಕರುಣವುಳ್ಳವಂಗಲ್ಲದೆ.
ಆಧಾರ ಮೂಲ ಮಧ್ಯ ಅಪರಸ್ಥಾನ
ಹೃತ್ಸರೋಜದೊಳಿರ್ದ ಕನ್ನಿಕೆ
ಬೆಳಗುಗೊಡನಂ ಹೊತ್ತು ಸೂಸಲೀಯದೆ
ಮೂವತ್ತಾರು ಮನೆಯನು ನೋಡಿ
ಸಾವಿರಂಗ ಪ್ರತಿಷ್ಠೆಯ ಮಾಡಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ಇದ್ದೆಸೆಯನಿದ್ದೆಸೆಯಾದಳು.
Transliteration Niṣkaḷātmananu arcisēnendembe
ā niṣkaḷavanarcisuva
pari heṅgō? Ele ayya:
Nīnu sakaladoḷage iddu niṣkaḷava bhēdisi
pūratanādenembe.
Nīnī bīḍaliriddu
obbaḷa saṅgavanaivaru māḍuvalli
kāba pariya hēgo?
Guru karaṇavuḷḷavaṅgallade.
Anāhatalōkadalli viśramisuvalli,
mūla toḍagi sādākhyapariyantara
holabudappi bappāga
kaṇḍavarāro ninna pariya,
guru karuṇavuḷḷavaṅgallade.
Ādhāra mūla madhya aparasthāna
hr̥tsarōjadoḷirda kannike
beḷagugoḍanaṁ hottu sūsalīyade
mūvattāru maneyanu nōḍi
sāviraṅga pratiṣṭheya māḍi
kapilasid'dhamallikārjunayyanemba
iddeseyaniddeseyādaḷu.