ಪ್ರಸಾದಿಯಾದಾತ ಪ್ರಳಯಕ್ಕೊಳಗಾಗ,
ಇಂದ್ರಿಯಗಳ ಹರಿಯಲೀಯ,
ಬಂದುದನತಿಗಳೆಯ - ಅದು ಲಿಂಗಮುಖದಿಂ ಬಂದುದಾಗಿ,
ಆತನ ಅಂಗ ಸರ್ವಾಂಗಲಿಂಗಾಂಗ;
ಆತನ ನಡೆ-ನುಡಿ ಚೈತನ್ಯ ಸಾಕ್ಷಾತ್ ಅಯ್ಯನ ಸದ್ಭಾವ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ
ನಿತ್ಯಪ್ರಸಾದಿಯ ಪರಿಯಿಂತುಂಟು.
Transliteration Prasādiyādāta praḷayakkoḷagāga,
indriyagaḷa hariyalīya,
bandudanatigaḷeya - adu liṅgamukhadiṁ bandudāgi,
ātana aṅga sarvāṅgaliṅgāṅga;
ātana naḍe-nuḍi caitan'ya sākṣāt ayyana sadbhāva.
Kapilasid'dhamallikārjunayyana kūḍida
nityaprasādiya pariyintuṇṭu.