Index   ವಚನ - 780    Search  
 
ಪ್ರಾಣಲಿಂಗಿಯಾದಾತನು ಪ್ರಳಯಕ್ಕೊಳಗಾಗನು. ಅನ್ಯಕ್ಕೆ ಕೈಯಾನನು ಎಲ್ಲವೂ ತನ್ನೊಳಗೆ ಇಪ್ಪವಾಗಿ. ತನ್ನ ಮೀರಿದುದೊಂದು ಆಧಿಕ್ಯ ಬೇರಿಲ್ಲಾಗಿ. ಕೈವಲ್ಯಲಿಂಗವು ಪ್ರಾಣವೆಂಬ ಸತಿಗೆ ಸಂಯೋಗ ಸಮನಿಸಿದ ಬಳಿಕ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ಉರುತರ ಪ್ರಾಣಲಿಂಗಿ.