Index   ವಚನ - 786    Search  
 
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನತಿ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.