Index   ವಚನ - 788    Search  
 
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ!