ಫಲವ ಮೀರಿದ ಪದವು, ಪದವ ಮೀರಿದ ಸೀಮೆ,
ಫಲಪದಕೆ ದೂರವಾಗಿಯೆ ಚಿತ್ರಿಸಿ ಕರುಣವ ಹಿಡಿದಾಚಾರ್ಯ
ಕರುಣಶುದ್ಧತೆಯಿಂದ ತರುಣಿಯ ಮಸ್ತಕದ
ಸಿಂಹಾಸನಾ ಕಾಲಕರ್ಮವ ಕಳೆದು
ಬೆಳಗು ಬೆಳಗಿನಲೀಗ ತಿಳಿದ ಬ್ರಹ್ಮಾಂಡದಾ ಸೊಮ್ಮು
ಭಕ್ತಿ ವೀರಮಾಹೇಶ್ವರವು ಆರಿಗಾಗದು ದೇವ,
ಸೋಹಮೆಂಬುದಕ್ಕತ್ಯತಿಷ್ಠ ಕಾನನದ
ಕಾವೋದ ಕಂಬನಿಯ ಭಾನು ತಾ
ಕಪಿಲಸಿದ್ಧಮಲ್ಲೇಶ್ವರಾ.
Art
Manuscript
Music
Courtesy:
Transliteration
Phalava mīrida padavu, padava mīrida sīme,
phalapadake dūravāgiye citrisi karuṇava hiḍidācārya
karuṇaśud'dhateyinda taruṇiya mastakada
sinhāsana kālakarmava kaḷedu
beḷagu beḷaginalīga tiḷida brahmāṇḍada som'mu
bhakti vīramāhēśvaravu ārigāgadu dēva,
sōhamembudakkatyatiṣṭha kānanada
kāvōda kambaniya bhānu tā
kapilasid'dhamallēśvarā.