ವಚನ - 790     
 
ಬಯಸದಿರು ಬಯಸದಿರು ಅನ್ಯೋನ್ಯರನು. ನೀನು ಬಯಸಿದಂತಾಗದದು, ನಿಬ್ಬಯಕೆಯು ತನುವಿನೊಳಗಳವಡಲು ಮನ ಮಹಾ ಸಾಯುಜ್ಯಪದವ ಮೀರಿಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನಾ.