ಭಸಿತವನಿಟ್ಟಿಹೆ, ರುದ್ರಾಕ್ಷಿಯ ಧರಿಸಿಹೆ,
ನೀನೊಲ್ಲೆ, ನೀನೊಲಿದೆ.
ನಿನ್ನೊಲುಮೆ ಏಕೆ ಎಲೆ ಅಯ್ಯಾ.
ನಿನ್ನವರೊಲ್ಲರು! ಆ ಒಲುಮೆ ತಾನೆನಗೇಕೆ?
ಹೇಳಾ, ಎಲೆ ಅಯ್ಯಾ.
ಪುರುಷರಿಲ್ಲದ ಸ್ತ್ರೀಯರ ಶೃಂಗಾರದಂತೆ
ನಿನ್ನೊಲುಮೆ ಏಕೆ? ಹೇಳಾ!
ನಿಜಭಕ್ತಿಯಲ್ಲಿರಿಸಿ ಸದ್ಭಕ್ತನೆಂದೆನಿಸಿ
ಸದಾಚಾರಿಗಳ ಸಂಗಡ ಎನ್ನ ಹುದುವಿನಲ್ಲಿ ಕುಳ್ಳಿರಿಸಿ
ಓರಂತೆ ಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನಾ,
ನೀನೊಲಿದುದಕ್ಕೆ ಇದು ಕುರುಹು.
ಅಲ್ಲದಿರ್ದಡೆ ಇದು ವೈಶಿಕ!
Art
Manuscript
Music
Courtesy:
Transliteration
Bhasitavaniṭṭihe, rudrākṣiya dharisihe,
nīnolle, nīnolide.
Ninnolume ēke ele ayyā.
Ninnavarollaru! Ā olume tānenagēke?
Hēḷā, ele ayyā.
Puruṣarillada strīyara śr̥ṅgāradante
ninnolume ēke? Hēḷā!
Nijabhaktiyallirisi sadbhaktanendenisi
sadācārigaḷa saṅgaḍa enna huduvinalli kuḷḷirisi
ōrante māḍā, kapilasid'dhamallikārjunā,
nīnolidudakke idu kuruhu.
Alladirdaḍe idu vaiśika!