ಮಧ್ಯದ ಮಧ್ಯದಲ್ಲಿ ವೇದಾದಿಮೂಲಿನಿ
ಆದಿಯ ಸಂತಕ್ಕೆ ಆದಿಯಾಗಿಪ್ಪಳು.
ಐದೇಳನಡರಿದಡೆ ಮೈದೋರದಿಪ್ಪಳು.
ಪತಿಗೆ ಪತಿಯಾಗಿಪ್ಪಳು ಸತಿಗೆ ಬುದ್ಧಿಯಾಗಿಪ್ಪಳು.
ತನ್ನ ನೋಡಲೆಂದು ಹೋದಡೆ ಚಂದ್ರ ಸೂರ್ಯರ ನುಂಗಿ
ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು,
ಈ ಮುವ್ವರಿಗೆ ಹುಟ್ಟಿಗೆ ತಾನೆಯಾದಳು.
ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿನ್ನ ಕೂಡಿದ ಕೂಟ ನೀನರಿದಡರಿವೆ,
ಮರದಡೆ ಮರವೆ.