ಮದಹಸ್ತಿ ಮದಹಸ್ತಿಯ ಹಿಡಿವುದಲ್ಲದೆ,
ಮತ್ತೊಂದು ರೂಪ ಹಿಡಿವುದೆ?
ಆ ರೂಪಿಂಗಾ ರೂಪು ಹಿಡಿವುದಲ್ಲದೆ,
ಮತ್ತೊಂದು ರೂಪ ಹಿಡಿವುದೆ?
ರೂಪಿಲ್ಲದಾತನ ರೂಪಿಸಿ ಹಿಡಿವೆನು
ಕಪಿಲಸಿದ್ಧಮಲ್ಲಿನಾಥಯ್ಯನ.
Transliteration Madahasti madahastiya hiḍivudallade,
mattondu rūpa hiḍivude?
Ā rūpiṅgā rūpu hiḍivudallade,
mattondu rūpa hiḍivude?
Rūpilladātana rūpisi hiḍivenu
kapilasid'dhamallināthayyana.