ಮೂರಕ್ಕೆ ಮುನ್ನೂರಕ್ಕೆ ಆರಕ್ಕೆ ಬೀಜವೈ,
ಬೀಜ ಮೂರೊಂದಾಗಿ ಪ್ರಸಾದದಾ ರೂಪು
ಪಂಚಬ್ರಹ್ಮ ಮೇಲೆ ಪ್ರಸನ್ನದ ಆಮೋದವಾದೆನೈ
ಬಸವಣ್ಣ, ನಿನ್ನ ಕರುಣವು ಇನ್ನು ಮುನ್ನಿನಂತಲ್ಲವೈ,
ಇನ್ನು ನಿನ್ನಂತಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mūrakke munnūrakke ārakke bījavai,
bīja mūrondāgi prasādada rūpu
pan̄cabrahma mēle prasannada āmōdavādenai
basavaṇṇa, ninna karuṇavu innu munninantallavai,
innu ninnantāde kapilasid'dhamallikārjunā.