ವಚನ - 1026     
 
ಸಂತವಿಸು ಸಂತವಿಸಲಾರೆ ನನ್ನ ಮನವ. ಮುನ್ನಿನವರು ಮಾಡಿ ಕೂಡಿದ ಪರಿಯ ನೆನೆದು ನಾನು ಬೇಯದ ಬೇಗೆಯ[ಲಿ] ಬೆಂದೆನಯ್ಯಾ, ಇಂತಲ್ಲದೆ, ಮರ ಕಿಚ್ಚು ಹತ್ತಿದಂತಾದೆ, ಕಪಿಲಸಿದ್ಧಮಲ್ಲಿಕಾರ್ಜುನಾ.