ವಚನ - 1029     
 
ಸಂಯೋಗದಲ್ಲಿ ವಿಯೋಗಿಯಾದೆ. ವಿಯೋಗದಲ್ಲಿ ಸಂಯೋಗಿಯಾದೆ. ವಿಯೋಗ ಸಂಯೋಗವ ಕೂಡಿದ ಶುದ್ಧ ತಾತ್ಪರ್ಯವಾದೆ. ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಸುಖವ ನಚ್ಚಿ ಶುದ್ಧ ಮರುಳಾದೆನು