•  
  •  
  •  
  •  
Index   ವಚನ - 1033    Search  
 
ಸಂಸಾರದ ವ್ಯಾಧಿಗೆ ಗುರು ಹೇಳಿದ ಔಷಧಂಗಳ ಮನದಲ್ಲಿಕ್ಕಿ ಮೂದಲಿಸಿ ಹೋಗಲೀಯದೆ ವಿಚಾರಿಸಿ ನೋಡುತಿದ್ದೆನು. ಸಂಸಾರಂಗಳು ಮುಟ್ಟಲಮ್ಮದೆ ಹೆರಹಿಂಗಿ ತೇರ್ಗಟ್ಟಿದಂತೆ ನಿಂದು, ಕಪಿಲಸಿದ್ಧಮಲ್ಲೇಶ್ವರದೇವರ ಶ್ರೀಪಾದಕ್ಕೆ ಬಟ್ಟೆಗೊಟ್ಟು ಭಯಂಗೊಂಡು ನಿಂದು ಪೋಗಯ್ಯಾ ಪೋಗಯ್ಯಾ ಎನ್ನುತ್ತಂ ಬರವೆ?
Transliteration Sansārada vyādhige guru hēḷida auṣadhigaḷa manadallikki mūḍalisi hōgalīyade vicārisi nōḍutiddenu. Sansāragaḷu muṭṭalam'made herahiṅgi tērgaṭṭidante nindu, kapilasid'dhamallēśvaradēvara śrīpādakke baṭṭegoṭṭu bhayagoṇḍu nindu pōgayyā pōgayyā ennuttaṁ barave?