Index   ವಚನ - 1042    Search  
 
ಸಕಲ ನಿಃಕಲವ ಪೂಜಿಸಿಹೆನೆಂದೆಂಬೆ, ಸಕಲವಾವುದು ನಿಃಕಲವಾವುದು ಹೇಳಾ. ಸ್ವಾತಂತ್ರ್ಯವ ಮೀರಿಪ್ಪುದೀಗ ಸಕಲ; ಪರಬ್ರಹ್ಮದ ಸೊಮ್ಮಾಗಿಪ್ಪುದೀಗ ಶಿವಯೋಗ! ಈ ಪೂಜಾದ್ವಯವನರಿತ ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವೆ ಸಂದಿಲ್ಲದೆ.