Index   ವಚನ - 1058    Search  
 
ಸಮನಿಸದಯ್ಯಾ ಭವಿಸಂಗ ಭಕ್ತಂಗೆ. ಸಮನಿಸದಯ್ಯಾ ಲಿಂಗಪ್ರಾಣಿಗೆ ಅನರ್ಪಿತ. ಸಮನಿಸದಯ್ಯಾ ಪ್ರಾಣಲಿಂಗಸಂಬಂಧಿಗೆ ಬಹುಲಿಂಗಪ್ರಸಾದ. ಇಂತೀ ಮೂರಕ್ಕಳುಕದ್ದಿದ್ದೆನಾದಡೆ, ನಾಯಕನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನಾ.