Index   ವಚನ - 1067    Search  
 
ಸಾಗರ ಸತ್ಯವ್ವೆ, ಹಲಬರ ಮುಖ ಪ್ರಭಾಳೆ, ನೀ ಬಾರವ್ವಾ, ಕಂಗಳ ಕೋಮಳೆ ಕಿವಿಗಳ ಸಂಬಂಧಿಯೆ, ನೀ ಬಾರವ್ವಾ. ಆತನ ಕಂಗಳ, ಕಿವಿಗಳ ಪರಿಯಾಣಕ್ಕೆ ಚೊಕ್ಕ ಸರದೋಗರನೆತ್ತುವೆ, ನೀ ಬಾರವ್ವಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯಂಗೆ.