ವಚನ - 1080     
 
ಸೀಮೆ ಸಂಗಮದಲ್ಲಿ ಲೀಯವಪ್ಪಾತ ಗುರು. ಆರೂಢದೈಕ್ಯದಲಿ ಲೀಯವಾಗಿ ಆರಾರನತಿಗಳೆದ ಆನಂದಮೂರ್ತಿಯನು ತೋರಬಲ್ಲಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.