Index   ವಚನ - 1126    Search  
 
ಹಲವು ಪರಿಯಲೆನ್ನ ದಲವ ಸಾಧಿಸೇನೆಂದಡೆ ಬಲ್ಲಿದನಾ ನಿನಗೆ ಕಂಡಾ ಅವ್ವ. ಕುಲವನುಳಿದೆ ದಲವನುಳಿದೆ ಗುರುವಿನ ಬಲುಹೆ ನೆಲೆಮನೆಯಾಯಿತ್ತು. ದಲವ ಸಾಧಿಸುವೆ ಇಷ್ಟು ಗುರು ಚರ ತ್ರಯದಲ್ಲಿ ಕಪಿಲಸಿದ್ಧಮಲ್ಲಿನಾಥನ ಕೂಡುವೆ ಅವ್ವಾ.