ವಚನ - 1135     
 
ಹಿಂದೆ ಹಲವು ಯುಗಂಗಳು ತಿರುಗಿ ಬಪ್ಪಾಗ ಅವನ್ನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಲಿ ಬಂದುದಿಲ್ಲ. ಅಯ್ಯ, ನಿನ್ನಾಜ್ಞೆಯಲಿ ಬಂದ ಯುಗಂಗಳು ಭವಭವದಲ್ಲಿ ಎನ್ನನೆ ಕಾಡಿದುವು, ಸಂಸಾರವಾಗಿ ಎನ್ನನೆ ಕಾಡಿದುವು, ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ ಎನ್ನನೆ ಕಾಡಿದುವು, ಆಶಾಪಾಶಂಗಳಾಗಿ ಗುರುವೆ ಬಸವಣ್ಣ ಅವೆಲ್ಲಾ ನಿಮ್ಮ ಅಧೀನದವು ಮಾಡಿದಡಾದವು, ಬೇಡಾಯೆಂದಡೆ ಮಾದವು. ಅವಕ್ಕೆ ಎನ್ನನೊಪ್ಪಿಸದೆ, ನಿನ್ನವ ನಿನ್ನವನೆನಿಸಾ ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ ಗುರು ಬಸವಣ್ಣ.