ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು,
ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು,
`ಅತ್ಯತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು,
ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ;
ಚಿತ್ತಶುದ್ಧನ ಮಾಡಿದ ಬಸವಣ್ಣ.
ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ,
ಮುಕ್ತನ ಮಾಡಿದ ಗುರು ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ
ಕಾರಣ ಧರೆಗೆ ಬಂದ.
Art
Manuscript
Music
Courtesy:
Transliteration
Hesariḍabārada ghanatara liṅgava hesariṭṭu,
vāmmanakkagōcaravappa liṅgava vākyakke tandu,
`atyatiṣṭhaddaśāṅgulaṁ' emba liṅgava cittakke tandu,
suttirda māyāprapan̄cava biḍisida basavaṇṇa;
cittaśud'dhana māḍida basavaṇṇa.
Malatrayaṅgaḷa haridu, śud'dha tātparyavaruhi,
muktana māḍida guru basavaṇṇa.
Kapilasid'dhamallikārjunayyanenna
kāraṇa dharege banda.