ಕ್ರೀವಿಡಿದು ಆಚರಿಸಬೇಕಲ್ಲದೆ,
ಅಕ್ರೀಯೊಡನಾಚರಿಸಲಾಗದು.
ಜ್ಞಾನವಿಡಿದು ನೋಡಬೇಕಲ್ಲದೆ,
ದೃಷ್ಟಿವಿಡಿದು ನೋಡಬಾರದು.
ಲಿಂಗವಿಡಿದು ಪೂಜಿಸುವುದಲ್ಲದೆ,
ಅಂಗವಿಡಿದು ಪೂಜಿಸಲಾಗದು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Art
Manuscript
Music
Courtesy:
Transliteration
Krīviḍidu ācarisabēkallade,
akriyoḍanācarisalāgadu.
Jñānaviḍidu nōḍabēkallade,
dr̥ṣṭiviḍidu nōḍabāradu.
Liṅgaviḍidu pūjisuvudallade,
aṅgaviḍidu pūjisalāgadu,
nam'ma kapilasid'dhamallikārjunanalli.