•  
  •  
  •  
  •  
Index   ವಚನ - 1168    Search  
 
ಜ್ಞಾನವಿಡಿದಾಚರಿಸಿದರಲ್ಲದೆ, ಕ್ರೀವಿಡಿದಾಚರಿಸಲಿಲ್ಲವು. ಕ್ರೀವಿಡಿದಾಚರಿಸಿದರಲ್ಲದೆ, ಜ್ಞಾನವಿಡಿದಾಚರಿಸಲಿಲ್ಲವು. ರೂಪುವಿಡಿದು ನಿರೀಕ್ಷಿಸುವರಲ್ಲದೆ, ಅರೂಪವಿಡಿದು ನಿರೀಕ್ಷಿಸರು. ಜ್ಞಾನಕ್ರಿಯೆವಿಡಿದಾಚರಿಸಿದರು ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಚೆನ್ನ ಬಸವಣ್ಣನವರು.
Transliteration Jñānaviḍidācarisidarallade, krīviḍidācarisalilla. Krīviḍidācarisidarallade, jñānaviḍidācarisalilla. Rūpaviḍidu nirīkṣisuvarallade, arūpaviḍidu nirīkṣisuvaru. Jñānakriyeviḍidācarisidaru nam'ma kapilasid'dhamallikārjunanalli, cenna basavaṇṇanavaru.