ಅಂಗಲಿಂಗಸಂಬಂಧಿಯಾದ ಬಳಿಕ
ಗುರುವಿನನುಮತದಿಂದ
ಸ್ವಾನುಭಾವಲಿಂಗಸಂಬಂಧಿಯಾದ ಬಳಿಕ,
ಪ್ರಾಣನಿರ್ಪ ನೆಲೆಯನರಿ.
ಆ ಲಿಂಗಮಜ್ಜನೋದಕದಿಂದ ನಿನ್ನ ಕಾಯಶುದ್ಧಿ;
ಆ ಲಿಂಗನಿರೀಕ್ಷಣೋದಕದಿಂದ ನಿನ್ನ ಅವಯವಶುದ್ಧಿ;
ಆ ಲಿಂಗಪ್ರಸಾದೋದಕ ನಿನ್ನ ಪರಮಪದವು.
ಇಂತು ಪಾದೋದಕತ್ರಯದಲ್ಲಿ, ಸುಖಿಯಾಗಿ ,
ಕಪಿಲಸಿದ್ಧಮಲ್ಲಿಕಾರ್ಜುನನ
ಕೂಡಿ ನಿತ್ಯನಾಗು ಸಂದೇಹವಿಲ್ಲದೆ.
Transliteration Aṅgaliṅgasambandhiyāda baḷika
guruvinanumatadinda
svānubhāvaliṅgasambandhiyāda baḷika,
prāṇanirpa neleyanari.
Ā liṅgamajjanōdakadinda ninna kāyaśud'dhi;
ā liṅganirīkṣaṇōdakadinda ninna avayavaśud'dhi;
ā liṅgaprasādōdaka ninna paramapadavu.
Intu pādōdakatrayadalli, sukhiyāgi,
kapilasid'dhamallikārjuna
kūḍi nityanāgu sandēhavillade.