ಲಿಂಗಾಂಗಿಗಳಿಗೆ ಪಾದೋದಕವಲ್ಲದೆ,
ಅಂಗಭವಿಗೆ ಪಾದೋದಕವೆಲ್ಲಿಹದೊ?
ಶರಣರಿಗೆ ಶಿವಾನುಭಾವಗೋಷ್ಠಿಯಲ್ಲದೆ?
ಶರ ತಾಗಿದವನಿಗೆ ಶಿವಾನುಭಾವಗೋಷ್ಠಿ ಎಲ್ಲಿಹದೊ?
ಲಿಂಗವಿರಹಿತರಿಗೆ ಪಾದೋದಕ ಸಲ್ಲದು, ಸಲ್ಲದು!
ಕೊಟ್ಟವಂಗೆ ಮುಕ್ತಿ ಮೊದಲೆ ಇಲ್ಲವು ಇಲ್ಲವು.
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Liṅgāṅgigaḷige pādōdakavallade,
aṅgabhavige pādōdakavellihado?
Śaraṇarige śivānubhāvagōṣṭhiyallade?
Śara tāgidavanige śivānubhāvagōṣṭhi ellihado?
Liṅgavirahitarige pādōdaka salladu, salladu!
Koṭṭavaṅge mukti modale illavu illavu.
Kapilasid'dhamallikārjunā.