•  
  •  
  •  
  •  
Index   ವಚನ - 1228    Search  
 
ಅವರವರ ಸದಾಚರಣೆ ಅವರವರಿಗೆ ; ಅವರವರ ದುರಾಚರಣೆ ಅವರವರಿಗೆ. ಅವರವರ ಸದಾಚರಣೆ ನಮಗೇನು ಮೋಕ್ಷವ ಕೊಟ್ಟಿತ್ತೊ ? ಅವರವರ ದುರಾಚರಣೆ ನಮಗೇನು ಭವದಲ್ಲಿ ತಳ್ಳಿಬಿಟ್ಟಿತ್ತೊ ? ನಮ್ಮ ಲಕ್ಷ್ಯ ಲಾಂಛನದಲ್ಲಿ, ನಿಮ್ಮ ಲಕ್ಷ್ಯ ನಮ್ಮಲ್ಲಿ; ಇದು ಸಟೆಯೆಂದು ನುಡಿಯಬೇಡ, ದೇವಾ. ಮಗನಿಗಾದ ನೋವು ತಂದೆ-ತಾಯಿಗಳಿಗಾಗದೆ ಅನ್ಯರಿಗೆಲ್ಲಿಹುದೊ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಮ್ಮ ನೋವೆ ನಿಮ್ಮ ನೋವು.
Transliteration Avaravara sadācaraṇe avaravarige; avara durācaraṇe avaravarige. Avaravara sadācaraṇe namagēnu mōkṣava koṭṭitto? Avaravara durācaraṇe namagēnu bhavadalli taḷḷibiṭṭitto? Nam'ma lakṣya lān̄chanadalli, nim'ma lakṣya nam'malli; idu saṭeyendu nuḍiyabēḍa, dēvā. Maganigāda nōvu tande-tāyigaḷigāgade an'yarigellihudō? Kapilasid'dhamallikārjunayya, nam'ma nōve nim'ma nōvu.