ಭಕ್ತಿಯ ಬೆಳಸಿ ಹೇಳಿದೆನಲ್ಲದೆ,
ಭಕ್ತಿಯ ಮಾಡಿ ಬೆಳೆಯಲಿಲ್ಲ ನಾನು.
ಭಕ್ತಿಯ ಶಕ್ತಿ ಬಸವಣ್ಣಂಗಾಯಿತ್ತು;
ಜ್ಞಾನದ ಶಕ್ತಿ ಚೆನ್ನಬಸವಣ್ಣಂಗಾಯಿತ್ತು.
ಯೋಗದ ಸಿದ್ದಿ ಸಿದ್ದರಾಮಂಗಾಯಿತ್ತು,
ನಿಮ್ಮರಮನೆಯಲ್ಲಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhaktiya beḷasi hēḷidenallade,
bhaktiya māḍi beḷeyalilla nānu.
Bhaktiya śakti basavaṇṇaṅgāyittu;
jñānada śakti cennabasavaṇṇaṅgāyittu.
Yōgada siddi siddarāmaṅgāyittu,
nim'maramaneyalli nōḍā,
kapilasid'dhamallikārjunā.