Index   ವಚನ - 1238    Search  
 
ನೆನಸುವೆ ಮರಸುವೆ ನೀನೆನ್ನ ತಂದೆ, ಎನ್ನ ಗುಣದೋಷ ನಿಮ್ಮದು. ಕೇಳಯ್ಯಾ ಎನ್ನ ಬಿನ್ನಪವ: ನಿಮ್ಮ ನೆನೆವವ ನಾನಲ್ಲ ಕಂಡಯ್ಯಾ; ನಿಮ್ಮಿಂದ ನಿಮ್ಮ ನೆನೆವೆನು, ಕೃಪೆಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.