ಆವಾಗಳು ನಿನ್ನವರುಗಳು ನೀನೆಂಬ ಮನವ,
ಅತಿ ಉನ್ನತೋನ್ನತವ ಕೊಡು ಕಂಡಾ,
ಎಲೆ ಅಯ್ಯಾ, ನಿಮ್ಮ ಧರ್ಮವಯ್ಯಾ.
ನಿನ್ನ ಲಾಂಛನವ ಕಂಡು ತಾತ್ಪರ್ಯವೆಂದು ನಂಬುವ
ಮನಸಿಂಗೆ ಮಂಗಳವನೀಯಯ್ಯಾ.
ನಿನ್ನವರ ಸಹ ಲೋಕದಲ್ಲಿ ಅವರ ಕೀಳಿಲ ಕಾಯ್ದಿಪ್ಪ ಸುಕೃತವನು
ತಪ್ಪದೆ ಕೊಡು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಧರ್ಮ.
Transliteration Āvāgaḷu ninnavaru nīnemba manava,
ati unnatōnnatava koḍu kaṇḍā,
ele ayyā, nim'ma dharmavayya.
Ninna lān̄chanava kaṇḍu tātparyavendu nambuva
manasiṅge maṅgaḷavanīyayya.
Ninnavara saha lōkadalli avara kīḷila kāydippa sukr̥tavanu
tappade koḍu, kapilasid'dhamallikārjunayya,
nim'ma dharma.