Index   ವಚನ - 1259    Search  
 
ಅಂಗಕ್ಕೆ ಲಿಂಗೋಪದೇಶ, ಮನಕ್ಕೆ ಮಂತ್ರೊಪದೇಶವೆ ಘನವೆಂದು ನಂಬಿದೆನಯ್ಯಾ, ನಂಬಿದೆನಯ್ಯಾ. ಈ ಎರಡರ ಬೋಧೋದ್ಗಾರಕೆ ಚೆನ್ನಬಸಣ್ಣನೆ ಘನಗುರು, ಘನಲಿಂಗ, ಘನಜಂಗಮವೆಂದು ನಂಬಿದೆನಯ್ಯಾ. ಇದನಲ್ಲೆಂದಡೆನ್ನಗುಣವೆನ್ನನೆ ಸುಡಲೀಯದೆ, ಅಲ್ಲಯ್ಯಾ, ಕಪಿಲಸಿದ್ಧಮಲ್ಲಯ್ಯಾ?