•  
  •  
  •  
  •  
Index   ವಚನ - 1261    Search  
 
ವ್ಯಾಧಿ ಹೋಗುವ ಪರ್ಯಂತರ ರಸರಸಾಯನದ ಹಂ[ಗ]ಯ್ಯಾ, ಕ್ಷುತ್ಪಿಪಾಸೆಯಡಗುವ ಪರ್ಯಂತರ ಅನ್ನೋದಕದ ಹಂ[ಗ]ಯ್ಯಾ. ನಾ ಲಿಂಗಸಂಬಂಧಿಯಾಗುವ ಪರ್ಯಂತರ ನಿಮ್ಮ ಹಂಗಿನವನಯ್ಯಾ. ಎಲೆ ಕಪಿಲಸಿದ್ಧಮಲ್ಲಿನಾಥಾ.
Transliteration Vyādhi hōguva paryanta rasarasāyanada haṁ[ga]yyā, kṣutpipāseyaḍaguva paryantara annōdakada haṁ[ga]yyā. Nā liṅgasambandhiyāguva paryantara nim'ma haṅginavanayyā. Ele kapilasid'dhamallinātha.