ವಚನ - 1269     
 
ಮಾದಾರನಲ್ಲಿ ಉಂಡ ಶಿವನು; ನೀವೇಕೆ ಉಣ್ಣಿಸರಿ ಎಂದು ಕೇಳಿದಡೆ. ಕೊಡುವೆನುತ್ತರವ, ಕೇಳಿರೆಲೆ ಮನುಜರಿರಾ. ಮಾದಾರನಲ್ಲುಂಡ, ಶಿವನು ಮೇದಾರನಲ್ಲಿಗೆ ಬಂದಲ್ಲಿ, ರೂಪಳಿದು ರೂಪಾಗಿ ಬಾ ಎಂದನಲ್ಲದೆ, ಸಮರಸ ಮಾಡಲಿಲ್ಲವು. ಮೇದಾರನಲ್ಲುಂಡು, ಮಾದಾರನ ಮನೆಗೆ ಬಂದಡೆ, ರೂಪಳಿದು ರೂಪಾಗಿ ಬಾ ಎಂದನಂದು ಚೆನ್ನನು. ಶಬ್ದಸೂತಕ ಶರಣರಿಗಲ್ಲದೆ ಸೂತಕರಿಗೆಲ್ಲಿಹದೋ ಕಪಿಲಸಿದ್ಧಮಲ್ಲಿಕಾರ್ಜುನಾ.