Index   ವಚನ - 1325    Search  
 
ಬರುವ ಮುಂದೆ ಪುರುಷನಿದ್ದೆ; ಬಂದ ಬಳಿಕ ಸ್ತ್ರೀಯಾದೆ; ಇನ್ನು ಮೇಲೆ ನಪುಂಸಕನಾದೆ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಬೇಕೆಂದಲ್ಲಿ ಪುರುಷನಾದೆ ನೋಡವ್ವಾ, ಎನ್ನ ಹೆತ್ತ ತಾಯೆ!