ವಚನ - 1383     
 
ವಾಕ್ಸಿದ್ಧಿಯುಳ್ಳವರು ಕೋಟ್ಯನುಕೋಟಿ; ಮನೋರಥಸಿದ್ಧಿಯುಳ್ಳವರು ಕೋಟ್ಯನುಕೋಟಿ; ಭಾವಸಿದ್ಧಿಯುಳ್ಳವರು ಕೋಟ್ಯನುಕೋಟಿ. ನಿಮ್ಮ ಸಿದ್ಧಿಯುಳ್ಳವರು ಇಲ್ಲ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.