Index   ವಚನ - 1392    Search  
 
ತನು ಕೊಡುವಡೆ ಗುರುವಿನದು; ಮನ ಕೊಡುವಡೆ ಲಿಂಗದದು; ಧನ ಕೊಡುವಡೆ ಜಂಗಮದದು; ಅವರ ಪದಾರ್ಥವನವರಿಗೆ ಕೊಟ್ಟು ಭಕ್ತನಾದೆನೆಂಬವರ ಹಿರಿಯತನದ ಕೇಡ ನೋಡಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.