ಯೋಗಭೂಷಣ, ನಿಮ್ಮ ಆದಿ ಅಕ್ಷರಭೇದ
ಆದಿಯಾಧಾರಂಗಳಿಲ್ಲದಂದು,
ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ,
ತಾನೆನ್ನ ಕರುಣದಿಂ ನಿತ್ಯನೆನಿಸಿ;
ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ
ದಾಗಾದೆನೈ ಚೆನ್ನಬಸವ ತಂದೆ;
ಯೋಗಮೂರುತಿಯೆ ನೀನೆನ್ನ ಗುರುವಾಗಿ
ಶಿವಯೋಗಿಯಾನಾದೆನಯ್ಯಾ.
ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ
ನಾ ನಿಮ್ಮ ಕರುಣದಲ್ಲಿ
ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ
ಆಗಮಕ್ಕೊಳಗಾದ ಆಗಮಕೆ ಹೊರಗಾದ
ಆನಂದಸ್ಥಾನದಲಿ ಸ್ವಯವಾದೆನೈ ದೇವ
ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ
ಕರುಣ ನಿಮಗಾಯಿತ್ತು,
ಶ್ರೀಗುರು ಚೆನ್ನಬಸವಣ್ಣ ತಂದೆ.
Art
Manuscript
Music
Courtesy:
Transliteration
Yōgabhūṣaṇa, nim'ma ādi akṣarabhēda
ādiyādhāragaḷilladandu,
ānandasthānadallippa guru basavaṇṇa,
tānenna karuṇadiṁ nityanenisi;
yōgasid'dhāṅgadallāda pan̄cabrahmadiṁ
dāgādenai cennabasava tande;
yōgamūrutiye nīnenna guruvāgi
śivayōgiyānādenayyā.
Ninnavara horegaide yōgiguru prabhurāya
nā nim'ma karuṇadalli
śivayōgamudreyane nenedu sukhiyādenai
āgamakkoḷagāda āgamake horagāda
ānandasthānadali svayavādenai dēva
yōgajñāna kapilasid'dhamallināthana
karuṇa nimagāyittu,
śrīguru cennabasavaṇṇa tande.