•  
  •  
  •  
  •  
Index   ವಚನ - 1489    Search  
 
ಜಲದಲ್ಲಿ ಚಂದ್ರನಿಲ್ಲ, ಜಲವೆಲ್ಲ ಮಾಯಾತ್ಮಕ. ವಸ್ತುವಲ್ಲ; ವಸ್ತ್ವಾತ್ಮಕ ಮಾಯೆಯಲ್ಲ. ಉಪಾಧಿಯಿಂದ ತೋರ್ಪುದೆಲ್ಲ ನಿಜವೆ ಅಯ್ಯಾ? ಸ್ಥಾಣು ಚೋರ ನ್ಯಾಯದಂತೆ, ಶುಕ್ತಿ ರಜತ ನ್ಯಾಯದಂತೆ, ರಜ್ಜು ಸರ್ಪ ನ್ಯಾಯದಂತೆ, ಅಧ್ಯಾರೋಪವಾದ ಅವಿದ್ಯೆಯಲ್ಲಿ ಲೇಸುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jaladalli candranilla, jalavella māyātmaka. Vastuvalla; vastvātmaka māyeyalla. Upādhiyinda tōrpudella nijave ayyā? Sthāṇu cōra n'yāyadante, śukti rajata n'yāyadante, rajju sarpa n'yāyadante, adhyārōpavāda avidyeyalli lēsuṇṭe? Kapilasid'dhamallikārjunā.