Index   ವಚನ - 1504    Search  
 
ಕಟೆದ ಕಲ್ಲ ಲಿಂಗವ ಮಾಡಿಕೊಟ್ಟಾತ ಗುರುವೆಂಬರು; ಆ ಲಿಂಗವ ಧರಿಸಿದಾತ ಶಿಷ್ಯನೆಂಬರು. ಕೊಟ್ಟ ಗುರು ದೇಶಪಾಲಾದ; ಕೊಟ್ಟ ಕಲ್ಲು ಲಿಂಗವೊ? ಕಲ್ಲಿನ ಕಲ್ಲು ಕಲ್ಲೆಂಬಡೆ, ಲಿಂಗವ ಮಾಡಿ ಕೊಟ್ಟ; ಲಿಂಗವೆಂದಡೆ ಪೂಜಾವಿರಹಿತವಾಯಿತ್ತು. ಪೂಜೆಯಿಲ್ಲದ ಲಿಂಗ ಪಾಷಾಣ. ಹೋದ ಗುರುವಿನ ಲಿಂಗ ಪಾಷಾಣಭೇದಿ; ಭೇದಿಸಿದಡೆ ಹುರುಳಿಲ್ಲ. ನದಿಯ ದಾಟುವಲ್ಲಿ ಭೈತ್ರವ ಹಿಡಿದು, ದಾಂಟಿದಂತ್ಯದಲ್ಲಿ ಬಿಟ್ಟುಹೋದರು. ಬಿಟ್ಟ ನಾವೆ ಮತ್ತೊಬ್ಬರಿಗೆ ಲೇಸು, ಈ ಲಿಂಗ ಬರದು ಆರಿಗೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.