Index   ವಚನ - 1528    Search  
 
ಲಿಂಗವ ಪೂಜಿಸಿ ಅಂಗವ ನಿರ್ವಯಲ ಮಾಡೆಹೆನೆಂಬವನ ಮುಖವ ನೋಡಲಾಗದು. ಕುರುಹಿಟ್ಟು ಪೂಜಿಸುವ ಲಿಂಗ ತಾನುಳಿವುದು ಭೂಮಿಯಲ್ಲಿ. ಲಿಂಗವ ಧರಿಸಿದ ದೇಹ ನಿರ್ವಯಲಹುದು. ಲಿಂಗಪೂಜೆಯಲ್ಲಿ ಹುರುಳಿಲ್ಲ, ಹುರುಳಿಲ್ಲ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.