•  
  •  
  •  
  •  
Index   ವಚನ - 1530    Search  
 
ಗಟ್ಟಿ ಹಿಡಿದು ಗೊತ್ತ ಮುಟ್ಟಬಾರದಯ್ಯಾ. ನೀರಲ್ಲಿಯ ಕ್ರೀಡೆ ಕುಂಬಳಕಾಯಿಗಲ್ಲದೆ ದೊಡ್ಡ ಬಂಡೆಗುಂಟೇನಯ್ಯಾ? ಚರಿಸುವ ಜೀವಿಗೆ ನಿರ್ವಯಲ ಪರವಸ್ತು ಲಿಂಗವಲ್ಲದೆ, ಪಾಷಾಣಮಯ ಲಿಂಗವೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Gaṭṭi hiḍidu gotta muṭṭabāradayya. Nīralliya krīḍe kumbaḷakāyigallade doḍḍa baṇḍeguṇṭēnayyā? Carisuva jīvige nirvayala paravastu liṅgavallade, pāṣāṇamaya liṅgave ayyā, kapilasid'dhamallikārjunā?