ವಚನ - 1563     
 
ಹುಟ್ಟಿ ಹುಟ್ಟಿ ಹೋಗುವದದು ಬಹುಕಷ್ಟವಯ್ಯಾ ; ಕೆಟ್ಟು ಕೆಟ್ಟು ಹೋಗುವದದು ಬೆಟ್ಟದ ಸಾಮರ್ಥ್ಯವಯ್ಯಾ. ಹುಟ್ಟಿ ಹೋದವರು ಕೋಟಾನುಕೋಟಿ, ಕೆಟ್ಟು ಹೋದವರು ಒಬ್ಬರೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.