ವಚನ - 1613     
 
ಹಲವರಿಪ್ಪರು ನೋಡಾ ಮೂಲೋಕದಲ್ಲಿ ಲಿಂಗಭಕ್ತರು. ಕೆಲವರಿಪ್ಪರು ನೋಡಾ ಮೂಲೋಕದಲ್ಲಿ ಸ್ಥಾವರಭಕ್ತರು. ಸಲುಗೆಯುಳ್ಳವರಿಪ್ಪರು ನೋಡಾ ಅನೇಕ ಕೋಟಿ ಭಕ್ತರು. ಒಬ್ಬರೂ ಇಲ್ಲ ನೋಡಾ ಅಜಾಂಡಕಾಂಡದಲ್ಲಿ ಜಂಗಮಭಕ್ತರು, ಕಪಿಲಸಿದ್ಧಮಲ್ಲಿಕಾರ್ಜುನಾ.