ವಚನ - 1618     
 
ಮುಳುಗುವಾತ ಮುಳುಗುವವನೆತ್ತಬಲ್ಲನೆ? ತಾ ಮಾಯೆಯೊಳಗಾಗಿ, ಮಾಯಿಕರ ತನ್ನ ಪಾದಾಂಬುವಿಂ ಪರಿಹರಿಪೆನೆಂಬವ ತೆಗೆದುಕೊಂಬವ ಇವರೀರ್ವರೂ ಮುಳುಗಿ ಯಮಪಾಶಕ್ಕೊಳಗಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.