•  
  •  
  •  
  •  
Index   ವಚನ - 1629    Search  
 
ಒಂದನೆಯ ಬೀಜ ಬಿತ್ತಿ ಬೆಳೆಯದಲೆ ಬೆಳೆಯಿತ್ತು. [ಎರಡನೆಯ ಬೀಜ ಸೃಷ್ಟ್ಯುನ್ಮುಖವಾಯಿತ್ತು.] ಮೂರನೆಯ ಬೀಜ ಅಲ್ಲಲ್ಲಿ ಜನಿಸಿತ್ತು. ನಾಲ್ಕನೆಯ ಬೀಜ ಮರ್ತ್ಯದಲ್ಲಿ ಜನಿಸಿ ಅಂಕುರಿಸಿತ್ತು. ಐದನೆಯ ಬೀಜ ಇದ್ದು ಇದ್ದು ಅಂಕುರಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ondaneya bīja bitti beḷeyadale beḷeyitu. [Eraḍaneya bīja sr̥ṣṭyunmukhavāyittu.] Mūraneya bīja allalli janisittu. Nālkaneya bīja martyadalli janisi aṅkurisittu. Aidaneya bīja iddu aṅkurisadu nōḍā, kapilasid'dhamallikārjunā.